Movie: Solillada Saradara
Music : Hamsalekha
Vocals : S. P. Balasubrahmanyam
Lyrics : Hamsalekha
Year: 1992
Director: Om Sai Prakash
kannada lyrics
ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಜ್ಞಾನ ಇದೆ, ಚಿನ್ನ ಇದೆ,
ಕಾವೇರಿ ಇದೆ
ಬಡತನವೆ ಮೇಲಾಗಿದೆ,
ನಮ್ಮತನವೆ ಮಂಕಾಗಿದೆ
ಯಾರಿಹರು ನಿಮ್ಮಲಿ,
ಮದಕರಿಯ ನಾಯಕ
ಕೆಚ್ಚೆದೆಯ ಎಚ್ಚಮ,
ರಣಧೀರರು ನುಡಿದಾಸರು
ಉಳಿದಿಹುದು ನಿಮ್ಮಲಿ,
ಹೊಯ್ಸಳರ ಕಿಡಿಗಳು
ಹೊನ್ನ ಮಳೆ ಸುರಿಸಿದ,
ಅರಿರಾಯರ ತೋಳ್ಬಲಗಳು
ಏಳಿರಿ, ಏಳಿರಿ,
ಈ ಪ್ರಾರ್ಥನೆಯ ಕೇಳಿರಿ
ಕಲಿಯಿರಿ, ದುಡಿಯಿರಿ,
ಉಳಿಸಿರಿ
ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಸುಸಂಸ್ಕೃತ ಚರಿತೆಯ
ತಾಯ್ನಾಡು
ಮಹೋನ್ನತ ಕಲೆಗಳ
ನೆಲೆವೀಡು
ಕೆಡಿಸದಿರು ಈ ಹೆಸರ,
ಈ ಹೆಸರ
ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ
ಓ ಅಭಿಮಾನಿ, ಓ ಅಭಿಮಾನಿ
function openCity(cityName){
var i;
var x=document.getElementsByClassName("city");
for(i=0;i