kannada lyrics
ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ
ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ
ನಿನ್ನ ಚಿತ್ತ ಚೋರನ ಸೊಗಸು ಹೇಳು ಹೇಗಿದೆ
ನಿನ್ನ ಚಿತ್ತ ಚೋರನ ಹೆಸರು ಹೇಳು ಏನಿದೇ
ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ
ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ
ಹೆಣ್ಣು ತನ್ನ ಗಂಡಿನ ಹೆಸರ ಹೇಳಬಾರದು
ಅವನ ಚೆಲುವ ಹೇಳುವೇ ನೀನು ನಾಚಬಾರದುಕಾಮನ ಬಿಲ್ಲೋಳಗೆ ನೀಲಿಯ ರಂಗವನು
ಮಾಯದ ಮುಖ ಅವನದು…
ಕಾಡುವ ಚೆಲುವು ಅವನದುರಾಜನು ಅವನಲ್ಲಾ ರಾಜರ ಗುರುವನು
ಪ್ರೇಮಕೆ ಉಸಿರುವನದು…
ದೇವರ ಹೆಸರವನದು…
ರವಿಕಾಂತಿ ಕಣ್ಣಿರುವ ನೋಟದವನು
ಬಲವೆಂಬ ರಾಮನಿಗೆ ತಮ್ಮನವನು
ಆ ರೂಪಕೆ ಯಾರು ಸಮರಿಲ್ಲಾ ಹೇಳಲೇ ಅವನ್ಯಾರು
ಆ ಹೆಸರಿಗೆ ಯಾರು ಎದುರಿಲ್ಲಾ ಹೇಳಲೇ ಅವನ್ಯಾರೂ
ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ
ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ
ನಿನ್ನ ಚಿತ್ತ ಚೋರನ ಸೊಗಸು ಹೇಳು ಹೇಗಿದೆ
ನಿನ್ನ ಚಿತ್ತ ಚೋರನ ಹೆಸರು ಹೇಳು ಏನಿದೇ
ನೀರಿನ ಅಲೆಮೇಲೆ ತೇಲುವ ಕಲೆ ಅವನು
ದೊರಕಿದೆ ಈ ಚೆಲುವಿಗೆ…
ಸಾಗರ ಮನೆ ಅವನಿಗೆ…
ಮಂತ್ರಿಯು ಅವನಲ್ಲಾ ತಂತ್ರದ ದೊರೆಯವನು
ಸಿಲುಕಿದ ಈ ಒಲವಿಗೆ…
ಸಾವಿರ ಹೆಸರು ಅವನಿಗೆ…
ನಗುವಲ್ಲೇ ನರನಾಡಿ ಮೀಟುವವನು
ಅಭಿಮನ್ಯು ಹೆಂಡತಿಗೇ ಮಾವನವನು
ಆ ಠೀವಿಗೆ ಜಗವೇ ವಸವಮ್ಮಾ ಶೋಕಲು ನನಗಾದೆ
ಆ ನಾಮಕೆ ಯುಗವೇ ಗುರುತಮ್ಮಾ ಒಲಿದರು ಮರುಳಾಗಿ
ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ
ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ
ನಿನ್ನ ಚಿತ್ತ ಚೋರನ ಸೊಗಸು ಹೇಳು ಹೇಗಿದೆ
ನಿನ್ನ ಚಿತ್ತ ಚೋರನ ಹೆಸರು ಹೇಳು ಏನಿದೇ
ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ
ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ
ಹೆಣ್ಣು ತನ್ನ ಗಂಡಿನ ಹೆಸರ ಹೇಳಬಾರದು
ಅವನ ಚೆಲುವ ಹೇಳುವೇ ನೀನು ನಾಚಬಾರದು
function openCity(cityName) {
var i;
var x = document.getElementsByClassName("city");
for (i = 0; i < x.length; i++) { x[i].style.display = "none"; } document.getElementById(cityName).style.display = "block"; }