kannada lyrics
ಜೋಗಯ್ಯ ಜೋಗಯ್ಯ ಕೈಯ್ಯಿ ನೋಡಯ್ಯಾ
ಮುಂದಕ್ಕೆ ನಾನ್ ಯಾರಿಗೇ ಮಡದಿಯಾಗುವೆ
ಜೋಗಮ್ಮ ಜೋಗಮ್ಮ ಕಾಸ್ ಹಾಕಮ್ಮಾ
ಮುಂದಕ್ಕೆ ಏನ್ ಆಗುವೇ ಕಣಿಯ ಹೇಳುವೇ
ಧಾನ್ಯದ ರೇಖೆ ಆಕಾಶಕ್ಕೆರಿದೇ
ಗಂಗೆಯ ರೇಖೆ ಪಾತಳಕ್ಕಿಳಿದಿದೆ
ಹೊಲವಾ ಉಳುವಾ ಬಸವ ಬರುವಾ
ತಾಳಿ ಬಿಗಿವಾ ಸುಖವಾಗಿ ಇಡುವಾಬ್ಯಾಡಲೋ ಜೋಗಿ ಅವನಾಗದ ಜೋಗಿ
ಬಸವನ ಕಾಟ ನಾ ತಾಳೆನು ಜೋಗಿ
ಬಸವಾ ಬಸವಾ ಅಂದೇ ನಾನು
ಹಸಿವಾ ಹಸಿವಾ ಅಂತಾನವನು
ಜೋಗಮ್ಮ ಜೋಗಮ್ಮ ಕಾಸ್ ಹಾಕಮ್ಮಾ
ಮುಂದಕ್ಕೆ ಏನ್ ಆಗುವೇ ಕಣಿಯ ಹೇಳುವೇ
ಜೋಗಯ್ಯ ಜೋಗಯ್ಯ ಕೈಯ್ಯಿ ನೋಡಯ್ಯಾ
ಮುಂದಕ್ಕೆ ನಾನ್ ಯಾರಿಗೇ ಮಡದಿಯಾಗುವೆ
ಬುಧನ ಜಾಗವೂ ಬಲು ಗಟ್ಟಿಯಾಗಿದೆ
ಶಂಕು ಚಕ್ರವು ಭೂಗುತ್ತ ತಿರುಗಿದೇ
ಅಗಸ ಅಗಸ ನಿನ್ನಾ ಅರಸ
ಬಟ್ಟೆ ಓಗೆವಾ ಗಂಡ ಸಿಗುವಾ
ಬ್ಯಾಡಲೋ ಜೋಗಿ ಅವನಾಗದೋ ಜೋಗಿ
ಒಗೆಯುವ ಕೈಯಲ್ಲಿನಾ ನೆನೆಯುವೆ ಜೋಗಿ
ದಿನವೂ ರೋಪು ನನಗೆ ಸೋಪು
ಹಚ್ಚಿ ಒಗೆವಾ ಹಿಂಡಿ ಎಸೆವಾ
ಜೋಗಮ್ಮ ಜೋಗಮ್ಮ ಮುಂದ ಹೋಗಮ್ಮೋ
ನೀ ಮೆಚ್ಚೋ ಗಂಡ್ ಯಾವುದು ನಿನಗೆ ದೊರಕದು
ಜೋಗಯ್ಯ ಜೋಗಯ್ಯ ಕಣ್ ನೋಡಯ್ಯ
ನಾ ಮೆಚ್ಚೋ ಗಂಡ ಯಾವುದು ನಾನೇ ಹೇಳುವೇ
ಯಾರವನಮ್ಮ ಆವ್ ಎಲ್ಲವನಮ್ಮ
ಹೇಗವನಮ್ಮ ಏನಾಗವನಮ್ಮ
ಬೇಗಾ ತಿಳಿಸು ಇಲ್ಲಿಗೆ ಕರೆಸು
ಲಗ್ನ ಬರೆಸು ತಾಳಿ ಬಿಗಿಸು
ಮನದೊಳಗವನೇ ನನ್ನ ಬದುಕೊಳಗವನೇ
ಎದುರೊಳಗವನೇ ನನ್ನ ಕಣ್ ಒಳಗವನೇ
ಬಾರೋ ಕೃಷ್ಣ ನೀನೇ ಗಂಡ
ನಿನಗೇ ಈಗ ತಾಳಿ ತಂದಾ
ಜೋಗಮ್ಮ ಜೋಗಮ್ಮ ಮುಂದ ಹೋಗಮ್ಮೋ
ನೀ ಮೆಚ್ಚೋ ಗಂಡ್ ಯಾವುದು ನಿನಗೆ ದೊರಕದು
ಜೋಗಯ್ಯ ಜೋಗಯ್ಯ ಬಾ ಜೋಗಯ್ಯ
ಹತ್ತಾರು ಕೂಸಾದರೂ ನನಗೆ ತಾರಯ್ಯಾ
function openCity(cityName) {
var i;
var x = document.getElementsByClassName("city");
for (i = 0; i < x.length; i++) { x[i].style.display = "none"; } document.getElementById(cityName).style.display = "block"; }