kannada lyrics
ಜಿಗಿ ಜಿಗಿ ಜಿಗಿ ಜಿಗಿ
ಜಿಂಬಂಬಂಬಂ ಬೊಂಬೆಯಾಟ
ಜಿಗಿ ಜಿಗಿ ಜಿಗಿ ಜಿಗಿ
ಜಿಂಬಂಬಂಬಂ ಬೊಂಬೆಯಾಟ
ಜಿಗಿ ಜಿಗಿ ಜಿಗಿ ಜಿಗಿ
ಜಿಂಬಂಬಂಬಂ ಬೊಂಬೆಯಾಟ
ಜಿಗಿ ಜಿಗಿ ಜಿಗಿ ಜಿಗಿ
ಜಿಂಬಂಬಂಬಂ ಬೊಂಬೆಯಾಟ
ಜನರೇ ಜನರೇ ಕೇಳಿ ಜನರೇ
ಒಂದು ಕಥೆಯ ಒಂದು ವ್ಯಥೆಯ
ಗಿರಿಜಾಪೂರದ ದೊರೆಯ ಮಗಳ
ಮದುವೆ ಕಥೆಯ ಮದುವೆ ವ್ಯಥೆಯ
ಜಿಗಿ ಜಿಗಿ ಜಿಗಿ ಜಿಗಿ
ಜಿಂಬಂಬಂಬಂ ಬೊಂಬೆಯಾಟ
ಜಿಗಿ ಜಿಗಿ ಜಿಗಿ ಜಿಗಿ
ಜಿಂಬಂಬಂಬಂ ಬೊಂಬೆಯಾಟ
ತಕಧಿಮಿತೊಂ ತಡಿಗಿಣತೊಂ
ತಕಧಿಮಿತೊಂ ತಡಿಗಿಣತೊಂ
ಗಿರಿಜಾಪುರದ ಮಹಾರಾಜನು
ಮಕ್ಕಳಿಲ್ಲದೇ ಆಳುತ್ತಿದ್ದನು
ಆ ರಾಜನ ಮುದ್ದಿನ ರಾಣಿಯು
ಸ್ವಂತ ಮಕ್ಕಳಿಲ್ಲದೆ ಅಳುತ್ತಿದ್ದಳು
ಪೂಜೆ ಮಾಡಿ ಬಂದ್ರು ಮಕ್ಕಳಿಲ್ಲ
ಕೋಟಿ ದಾನ ಎತ್ತಿ ಕೊಟ್ರು ಮಕ್ಕಳಿಲ್ಲ
ಯುದ್ಧ ಮಾಡಿ ಬಂದ್ರು ಮಕ್ಕಳಿಲ್ಲ
ದಿನ ನಿದ್ದೆ ಮಾಡಿ ಎದ್ರು ಮಕ್ಕಳಿಲ್ಲ
ಹೀಗಿರತಕ್ಕಂತ ಕಾಲದಲ್ಲಿ
ಈಶ್ವರನು ಕಣ್ಣು ಬಿಟ್ಟಾ…
ಗಂಡು ಮಗು ಬೇಕು ಅಂತ ಬೇಡಿಕೊಂಡ
ರಾಜ ರಾಣಿಗೆ ಒಂದು ಹೆಣ್ಣು ಮಗುವ ಕೊಟ್ಟ
ನಾವು ಕೇಳೋದ ಒಂದು ಕಣೆಯಾ
ಶಿವ ನೀಡೋದು ಒಂದು ಕಾಣೆಯ
ಕೂಗಿ ಮೃಷ್ಟಾನ್ನ ಕೊಡುತ್ತಾನೆ
ನಡುವೆ ಕಲ್ಲುನೂ ಬೆರೆಸುತ್ತಾನೆ
ಗಂಡಾಗಿದ್ದ ರಾಜ್ಯ ಪರರ ಸೊತ್ತು
ಎಂಬ ಚಿಂತೆ ರಾಜನ ನೆತ್ತಿ ಮೇಲೆ ಬಿತ್ತೂ
ತನ್ನ ತಂಗಿಯ ಮಗನ್ನ ಕರೆಸಿಕೊಂಡ
ಅಂಬೆಗಾಲಿನ ಮಗಳ ಗಂಡ ಮಾಡಿಕೊಂಡ
ಜಿಗಿ ಜಿಗಿ ಜಿಗಿ ಜಿಗಿ
ಜಿಂಬಂಬಂಬಂ ಬೊಂಬೆಯಾಟ
ಜಿಗಿ ಜಿಗಿ ಜಿಗಿ ಜಿಗಿ
ಜಿಂಬಂಬಂಬಂ ಬೊಂಬೆಯಾಟ
ತಕಧಿಮಿತೊಂ ತಡಿಗಿಣತೊಂ
ತಕಧಿಮಿತೊಂ ತಡಿಗಿಣತೊಂ
ಕುಂಟೆ ಬಿಲ್ಲೆಯಾಡೋ ಮಕ್ಕಳು
ಚೆಂಡು ಕೋಲಾಟ ಆಡೋ ಪುಟ್ಟ ವಯಸ್ಸಿನವು
ನಾಳೇ ಏನಿದೇ ಎಂಬ ಚಿಂತೆಯಿಲ್ಲ
ತಾವು ಗಂಡ ಹೆಂಡತಿ ಎಂಬ ಬುದ್ದಿಯಿಲ್ಲಾ
ತುಂಗಾ ನದಿಯ ದೊಡ್ಡ ತೀರದಲ್ಲಿ
ಒಮ್ಮೆ ದೋಣಿಯು ಏರೋ ತುಂಟ ಆಟದಲಿ
ಗಂಡನ ಪಾತ್ರದ ಚಿಕ್ಕ ಮಗು
ಅಯ್ಯೋ ಕೈ ಜಾರಿ ಹೋಯಿತು ನದಿಯ ಸುಳಿಯಲಿ
ನಂಬಿರತಕ್ಕಂತ ಕಾಲದಲ್ಲಿ
ಈಶ್ವರನು ಕೈಯ ಬಿಟ್ಟ
ನೀರಿನಲ್ಲಿ ಮುಳುಗಿದ ಅಳಿಯ ಸತ್ತಾನೋ
ಇಲ್ಲವೋ ಎಂಬ ಅನುಮಾನ ತಂದಿಟ್ಟ
ಬೆಳೆದಳು ನೋಡಿ ರಾಜಕುಮಾರಿ
ಯೌವ್ವನ ತುಂಬಿದ ಹೆಣ್ಣಾಗಿ
ವೀರರ ಕೈಗೆ ಧೀರನ ಮೈಗೆ
ಒಪ್ಪುವ ಸುಂದರ ಹೆಣ್ಣಾಗಿ
ಪ್ರೇಮದ ಬಲೆಯಲಿ ಬಿದ್ದಳು ಒಮ್ಮೆ
ಊರಿನ ಶೂರನ ಕಣ್ಣೋಟಕೇ
ರಾಜನು ರಾಣಿಯು ಚಿಂತೆಗೆ ಬಿದ್ದರು
ಇಬ್ಬರ ಪ್ರೇಮದ ವಿವಾಹಕೆ
ಜಿಗಿ ಜಿಗಿ ಜಿಗಿ ಜಿಗಿ
ಜಿಂಬಂಬಂಬಂ ಬೊಂಬೆಯಾಟ
ಜಿಗಿ ಜಿಗಿ ಜಿಗಿ ಜಿಗಿ
ಜಿಂಬಂಬಂಬಂ ಬೊಂಬೆಯಾಟ
ನೀರಲ್ಲಿ ಬಿದ್ದ ಅಂದಿನ ಗಂಡ
ಧಿಮ್ಮನೇ ಬಂದನು ಮಾಯಾ ಮಯಾ
ನೀರಲ್ಲಿ ಬಿದ್ದ ಅಂದಿನ ಗಂಡ
ಧಿಮ್ಮನೇ ಬಂದನು ಮಾಯಾ ಮಯಾ
ಬಾಲ್ಯದ ಶಾಪ ಪ್ರೇಮಕೆ ಬಡಿದು
ರಾಜಕುಮಾರಿಗೇ ಅಯೋಮಯ
ಬಾಲ್ಯದ ಶಾಪ ಪ್ರೇಮಕೆ ಬಡಿದು
ರಾಜಕುಮಾರಿಗೇ ಅಯೋಮಯ
function openCity(cityName) {
var i;
var x = document.getElementsByClassName("city");
for (i = 0; i < x.length; i++) { x[i].style.display = "none"; } document.getElementById(cityName).style.display = "block"; }