kannada lyrics
ಇರು ನೀ ಜೊತೆ
ಬದುಕಿನ ತರಗತಿಯೊಳಗೆ
ಸಹಪಾಠಿ ನಾನಾಗಿ
ಹಾಜರಿಯ ನೀಡುವೆ
ಹಿಂಬಾಲಿಸಿ ನಾ ನಿನ್ನ ಓದುವೆನು
ಇನ್ನಾರಿಗಂತೂ ಹೇಳದಿರೋ
ಕಥೆಯೊಂದ ಹೇಳುವೆ
ನೀನೆ ನನ್ನ ಪಾಠವು
ನೀನೆ ಪೂರ್ತಿ ಅಂಕವು
ನನ್ನ ಬೆರಳನ್ನು ಹಿಡಿ ನೀನೆ
ಜೋಪಾನ ಮಾಡಿಕೊ…
ಸಹಪಾಠಿಯೇ (ಸಹಪಾಠಿಯೇ)
ಮುದ್ದಾದ ಗುಬ್ಬಿ ಮಾತನು
ದಿನ ಆಲಿಸೋ… ಗೂಡಂತೆ ನೀನಿರು
ನನ್ನ ಜೀವದ ಪುಸ್ತಕದಲ್ಲಿರೋ
ನವಿಲಿನ ಗರಿಯೇ ನೀನು
ಬಳಿ ಬಂದರೆ… ದೋಣಿ ಆಟವ
ನಿನಗಾಗಿ ನಾ ಕಲಿಸುವೆ
ಹಿಂಬಾಲಿಸಿ ನಾ ನಿನ್ನ ಬರೆಯುವೆನು
ಇನ್ನಾರಿಗಂತೂ ಹೇಳದಿರೋ
ಪುಟವೊಂದ ತೆರೆಯುವೆ
ನೀನೆ ನನ್ನ ಪಾಠವು
ನೀನೆ ಪೂರ್ತಿ ಅಂಕವು
ನನ್ನ ಬೆರಳನ್ನು ಹಿಡಿ ನೀನೆ
ಜೋಪಾನ ಮಾಡಿಕೊ… ಸಹಪಾಠಿಯೇ
ಆ ಚಂದಮಾಮ ದೋಸ್ತಿಯೇ
ನೆನಪಾಗದು ನಿನ್ನ ಸಂಘ ಸೇರಲು
ರಜೆಗಿಂತಲೂ ಖುಷಿ ನೀಡುವ
ವಿಷಯವೇ ನಿನ್ನ ನಗು
ಆ ನಗುವಲೇ ದಿನವ ಕಳೆಯುವ
ನನಗಂತೂ ಬಿಗುಮಾನವೇ
ಹಿಂಬಾಲಿಸಿ ನಾ ನಿನ್ನ ಸೇರುವೆನು
ಇನ್ನಾರಿಗಂತೂ ಹಾಡದಿರೊ
ಹಾಡೊಂದ ಹಾಡುವೆ
ನೀನೆ ನನ್ನ ಪಾಠವು
(ನನ್ನ ಪಾಠವು)
ನೀನೆ ಪೂರ್ತಿ ಅಂಕವು
ನನ್ನ ಬೆರಳನ್ನು ಹಿಡಿ ನೀನೆ
(ನನ್ನ ಬೆರಳನ್ನು ಹಿಡಿ ನೀನೆ)
ಜೋಪಾನ ಮಾಡಿಕೊ… ಸಹಪಾಠಿಯೇ
function openCity(cityName){
var i;
var x=document.getElementsByClassName("city");
for(i=0;i
.